ಧಾರವಾಡ ಜಿಲ್ಲೆ
ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ. ಇದಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ.
ಧಾರವಾಡ ಎಂದಾಕ್ಷಣ ನೆನಪಿಗೆ ಬರುವುದು ಹಾಲಿನಿಂದ ಮಾಡಲ್ಪಡುವ ಸಿಹಿ ತಿನಿಸು - "ಧಾರವಾಡ ಪೇಡ"
ಧಾರವಾಡ ಶಬ್ಧದ ಅರ್ಥ, ಸುಧೀರ್ಘ ಪ್ರವಾಸದಲ್ಲಿ ಪಡೆಯುವ ಸಣ್ಣ ವಿಶ್ರಾಮ ಅಥವಾ ಸಣ್ಣ ವಿಶ್ರಾಂತಿಧಾಮ ಆಗಿದೆ. ಮೂಲತಃ ಧಾರವಾಡ ಶಬ್ಧವು ಸಂಸ್ಕೃತದ "ದ್ವಾರವಾಟ" ಶಬ್ದದಿಂದ ಬಂದಿದೆ. ಸಂಸ್ಕೃತದಲ್ಲಿ "ದ್ವಾರ" ಎಂದರೆ "ಬಾಗಿಲು" ಮತ್ತು "ವಾಟ" ಎಂದರೆ "ಊರು". ಬಹಳ ಕಾಲದಿಂದಲೂ ಧಾರವಾಡವು ಮಲೆನಾಡು ಮತ್ತು ಬಯಲು ಪ್ರದೇಶಗಳಿಗೆ ರಹದಾರಿಯಾಗಿರುವುದರಿಂದ ಈ ಹೆಸರು ಸೂಕ್ತವಾಗಿದೆ.
ಭಾರತ ಸ್ವಾತಂತ್ರ್ಯಾ ನಂತರ, ೧೯೫೬ರಲ್ಲಿ ಕನ್ನಡ ಭಾಷಾವಾರು ವಿಂಗಡಣೆಯಿಂದಾಗಿ ಧಾರವಾಡವು ಮೈಸೂರು ರಾಜ್ಯದ ಭಾಗವಾಯಿತು. ೧೯೭೨ ರಲ್ಲಿ ಮೈಸೂರು ರಾಜ್ಯ ಕರ್ನಾಟಕವಾಗಿ ಮರುನಾಮಕರಣಗೊಂಡಿತು.
೧೯೯೭ರ ಮೊದಲು ಧಾರವಾಡದ ವಿಸ್ತೀರ್ಣ 13738 ಚ.ಕೀ.ಮೀ ಆಗಿತ್ತು. ೧೯೯೭ರಲ್ಲಿ ಧಾರವಾಡ ಜಿಲ್ಲೆಯನ್ನು ವಿಂಗಡಿಸಿ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳನ್ನಾಗಿ ಮಾಡಲಾಯಿತು. ಇದಲ್ಲದೆ ಮೂಲ ಧಾರವಾಡದ ಸ್ವಲ್ಪ ಭಾಗವನ್ನು ಹೊಸ ಜಿಲ್ಲೆ ದಾವಣಗೆರೆಯ ಭಾಗವಾಗಿ ಮಾಡಲಾಯಿತು.
ಧಾರವಾಡವು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳು ಮತ್ತು ಇನ್ನೂ ಹಲವಾರು ಪ್ರತಿಷ್ಟಿತ ವಿದ್ಯಾಲಯಗಳ ತವರೂರಾಗಿದೆ.
ಧಾರವಾಡ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿಸ್ತೀರ್ಣ | 4,265 ಚ.ಕೀ.ಮೀ. |
ಜನಸಂಖ್ಯೆ | 18,46,993 |
ಸಾಕ್ಷರತೆ | ೭೮% |
ಹೋಬಳಿಗಳು | ೧೪ |
ಒಟ್ಟು ಹಳ್ಳಿಗಳು | ೩೯೦ |
ಗ್ರಾಮ ಪಂಚಾಯ್ತಿ | ೧೨೭ |
ತಾಲ್ಲೂಕುಗಳು | ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ, ನವಲಗುಂದ |
ತಾಲೂಕು ಪಂಚಾಯ್ತಿ | ೫ |
ನಗರ ಪಟ್ಟಣಗಳು | ೬ |
ನೈಸರ್ಗಿಕ ಸಂಪತ್ತು | ೩೫,೨೩೫ ಹೆ. ಅರಣ್ಯ |
ಲಿಂಗಾನುಪಾತ | ೯೪೮ ಹೆಣ್ಣು : ೧೦೦೦ ಗಂಡು |
ನದಿಗಳು | ಮಲಪ್ರಭಾ, ಶಾಲ್ಮಲಾ, ಧರ್ಮ, ವರದಾ, ಗೂಗಿಹಳ್ಳ, ತುಪ್ಪರಿ ಹಳ್ಳ, ಪಿಂಜರಹಳ್ಳ, ಹಂದಿನಗಹಳ್ಳ, ಬೆಣ್ಣೆಹಳ್ಳ |
ಮುಖ್ಯ ಬೆಳೆ | ಹತ್ತಿ, ಜೋಳ, ಸಜ್ಜೆ, ನವಣೆ, ಕುಸುವೆ, ಶೇಂಗಾ, ಭತ್ತ, ತೊಗರಿ, ಹುರುಳಿ, ಹೆಸರುಮಮ್ ತೆಂಗು, ಅಡಿಕೆ, ದ್ರಾಕ್ಷಿ, ಮಾವು, ಪೇರಲೆ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಇತ್ಯಾದಿ. |
ಉದ್ಯಮಗಳು | ಹತ್ತಿ ಕಾರ್ಖಾನೆ, ಎಣ್ಣೆ ಗಿರಣಿ, ಸೀರೆ ಕೈಮಗ್ಗ, ಬಿದಿರು, ಸಿಮೆಂಟ್ ಕೊಳವೆ ತಯಾರಿಕೆ ಇತ್ಯಾದಿ |
ಪ್ರವಾಸಿ ತಾಣಗಳು | ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನ, ಉಂಕಲ್ ಸರೋವರ, ಭವಾನಿಶಂಕರ ದೇವಾಲಯ, ನೃಪತುಂಗ ಬೆಟ್ಟ ಗ್ಲಾಸ್ ಹೌಸ್ |
ಸಾಂಸ್ಕೃತಿಕ ಕಲಾ ಪ್ರಕಾರಗಳು | ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ಜೊಡು ಹಲಗೆ, ಲಂಬಾಣಿ ನೃತ್ಯ, ವೀರಭದ್ರ ಕುಣಿತ |
ಸುಪ್ರಸಿದ್ಧ ವ್ರಕ್ತಿಗಳು | ಡಿ. ಆರ್. ಬೇಂದ್ರೆ, ಗಂಗೂಬಾಯಿ ಹಾನಗಲ್, ಸುಧಾ ಮೂರ್ತಿ, ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್, ಪಂಡಿತ್ ಸವಾಯಿ ಗಂಧರ್ವ, ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಕುಮಾರ್ ಗಂಧರ್ವ, ಪಂಡಿತ್ ಭೀಮಸೇನ್ ಜೋಶಿ, ಗಿರೀಶ್ ಕಾರ್ನಾಡ್, ಸುರೇಶ್ ಹೆಬ್ಳೀಕರ್ |
ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು
ಕ್ಷೇತ್ರ | ವಿಧಾನಸಭಾ ಸದಸ್ಯರು | ಪಕ್ಷ |
---|